ವಿದ್ಯಾರ್ಥಿಗಳಿಗೆ ವಿದಾಯಕೂಟ ಕಾರ್ಯಕ್ರಮ

ವಿದ್ಯಾರ್ಥಿಗಳಿಗೆ ವಿದಾಯಕೂಟ ಕಾರ್ಯಕ್ರಮ

Monday, March 7th, 2022

ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ವಿದಾಯಕೂಟ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರು ಗಂಗಮ್ಮ, ಶಿಕ್ಷಕ ವೃತ್ತಿಯ ಎಂದರೆ ಶ್ರೇಷ್ಠವಾದ ವೃತ್ತಿ. ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ಮಾರ್ಗದರ್ಶಕರಾಗಬೇಕು. ವಿದ್ಯಾರ್ಥಿಗಳ ಜೀವನವನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರು ಡಾ. ಶೋಭಿತಾ ಸತೀಶ್ ಮತ್ತು ಉಪನ್ಯಾಸಕರಾದ ರಾಜೀವಿ, ಅನುರಾಧ, ರಘುರಾಜ್, ಕೃಷ್ಣವೇಣಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಒಂದೆರಡು ಶುಭನುಡಿಗಳನ್ನು ನುಡಿದರು. ವಿದ್ಯಾರ್ಥಿಗಳಾದ ಅಗಮ್ಯ, ಪ್ರಕೃತಿ, ಸುಪ್ರೀತ್ […]

ದೀಪ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ದೀಪ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Monday, March 7th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 7/3/2022 ರಂದು ದೀಪ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರು ಮಹೇಶ್ ಪಿಯುಸಿ ಕಾಲೇಜಿನ ಸುಮತಿ ಪೈ, ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುವುದು ಮಾತ್ರವಲ್ಲ ದೇಶದ ಉತ್ತಮ ಪ್ರಜೆಯಾಗಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ತುಂಬ ಧನಾತ್ಮಕ ಚಿಂತನೆಯನ್ನು ಮೂಡಿಸಬೇಕು ಎಂದು ನುಡಿದರು. ಇನ್ನೋರ್ವ ಅತಿಥಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರು ಸತೀಶ್ ರಾವ್, ಯಾವುದೇ […]

ಶ್ರೀ ಚನ್ನವೀರ ಕಣವಿಯವರ ಸಂಸ್ಮರಣಾ ಕಾರ್ಯಕ್ರಮ

ಶ್ರೀ ಚನ್ನವೀರ ಕಣವಿಯವರ ಸಂಸ್ಮರಣಾ ಕಾರ್ಯಕ್ರಮ

Saturday, February 19th, 2022

ಪುತ್ತೂರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 19.02.2022ರಂದು ಶ್ರೀ ಚನ್ನವೀರ ಕಣವಿಯವರ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೊದಲಿಗೆ ಚನ್ನವೀರ ಕಣವಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ನಂತರ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಪ್ರಾರ್ಥನೆಯನ್ನು ಮಾಡಿದರು. ಸಂಸ್ಥೆಯ ಸಹಾಯಕ ಪ್ರಾಧ್ಯಾಪಾಕಿಯಾಗಿರುವ ಶ್ರೀಮತಿ ಭುವನೇಶ್ವರಿ ಎ. ಯನ್ ಸ್ವಾಗತಿಸಿದರು, ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಚನ್ನಾವೀರ ಕಣವಿಯವರ ಬಗ್ಗೆ ಭಾಷಣ, ಭಾವಗೀತೆ ಮತ್ತು ಸ್ವರಚಿತ ಕವನವನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಅನುರಾಧ […]

ಸೂರ್ಯ ನಮಸ್ಕಾರ ಕಾರ್ಯಕ್ರಮ

ಸೂರ್ಯ ನಮಸ್ಕಾರ ಕಾರ್ಯಕ್ರಮ

Friday, February 18th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಯೋಗ ತರಬೇತುದಾರರು ಶ್ರೀಮತಿ ಶರಾವತಿ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸೌಹಾರ್ದ ಭೇಟಿ ಕಾರ್ಯಕ್ರಮ

ಸೌಹಾರ್ದ ಭೇಟಿ ಕಾರ್ಯಕ್ರಮ

Friday, February 18th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೌಹಾರ್ದ ಭೇಟಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾದಿಹಳ್ಳಿ ರಾಮಕೃಷ್ಣ ಮಠದ ಸ್ವಾಮಿ ಬೋಧಸ್ವರೋಪಾನಂದಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿವೇಕಾನಂದರ ಜೀವನದ ತತ್ವಗಳು ನಮಗೆಲ್ಲರಿಗೂ ಮಾದರಿಯಾಗಬೇಕು ಎಂದರು. ಮಾದಿಹಳ್ಳಿ ಬದರಿಕಾ ಶ್ರಮ ವಿದ್ಯಾಶಾಲೆಯ ಎಂ. ಶ್ರೀನಿವಾಸ್ ಪ್ರಿನ್ಸಿಪಾಲ್ ಮತ್ತು ಶಿಕ್ಷಣ ಸಂಯೋಜಕ ಮೋಹನ್ ರಾಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಡಾ. ಶೋಭಿತಾ ಸತೀಶ್ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿಗಳಾದ ರಕ್ಷಾ ವಂದಿಸಿದರು. ವೃದ್ಧಿ ಕಾರ್ಯಕ್ರಮವನ್ನು ನಿರೂಪಿಸಿದರು.

ಗಣರಾಜ್ಯ ದಿನಾಚರಣೆ

ಗಣರಾಜ್ಯ ದಿನಾಚರಣೆ

Wednesday, January 26th, 2022

26-1-2022 ರಂದು ಕಾಲೇಜಿನಲ್ಲಿ ಗಣರಾಜ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ಸೈನಿಕ ಮೇಜರ್ ಸುಬೇದಾರ್ ಚಂದ್ರಶೇಖರ್ ಅವರು ಧ್ವಜಾರೋಹಣಗೈದರು.ಕಾರ್ಯಕ್ರಮದ ವಿಶೇಷತೆಯ ಕುರಿತು ಶ್ರೀಮತಿ ಗಂಗಮ್ಮ ಎಚ್ ಶಾಸ್ತ್ರಿ ಸಂಚಾಲಕರು ವಿವೇಕಾನಂದ ಬಿಎಡ್ ಕಾಲೇಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ 4 ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು ಸಂಚಾಲಕರು ಸದಸ್ಯರು ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಬಿಎಡ್ ವಿದ್ಯಾರ್ಥಿ ಶಿಕ್ಷಕರು ಉಪಸ್ಥಿತರಿದ್ದರು.

ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ

ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ

Tuesday, January 25th, 2022

ದಿನಾಂಕ 25.01. 2022 ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾಲೇಜಿನ ಸಹ ಪ್ರಾಧ್ಯಾಪಕರಾದ ಶ್ರೀ ರಘುರಾಜ್ ಯು ವಿ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದರು. ಸಹ ಪ್ರಾಧ್ಯಾಪಕರಾದ ಶ್ರೀಮತಿ ಭುವನೇಶ್ವರಿ ಎ ಎನ್ ಅಧ್ಯಕ್ಷತೆಯನ್ನು ವಹಿಸಿದ್ದರು.  

ವಿವೇಕಾನಂದ ಜಯಂತಿ

ವಿವೇಕಾನಂದ ಜಯಂತಿ

Friday, January 14th, 2022

ವಿವೇಕಾನಂದರ ಆದರ್ಶಗಳು ಎಲ್ಲರಿಗೂ ಸ್ಫೂರ್ತಿಯಾಗಬೇಕು. ಪರಿವರ್ತನೆ ಎಂಬುದು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಬರಬೇಕು ಆಗ ಮಾತ್ರವೇ ಪರಿವರ್ತನೆಯಾಗಲು ಸಾಧ್ಯ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳ ಇಲ್ಲಿನ ಔಷಧ ತಜ್ಞರಾದ ಸುರೇಶ್ ಪರ್ಕಳ ಹೇಳಿದರು. ಇವರು ವಿವೇಕಾನಂದ ಬಿಎಡ್ ಕಾಲೇಜ್­ನಲ್ಲಿ ಬುಧವಾರ ನಡೆದ ವಿವೇಕಾನಂದ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಮ್ಮ ಸೈನಿಕರ ಸೇವೆ ನಮಗೆ ಆದರ್ಶವಾಗಬೇಕು ಅವರೇ ನಮ್ಮ ದೇಶದ ನಿಜವಾದ ಹೀರೋಗಳು. ಪ್ರತಿಯೊಂದು ಯುವಜನತೆಯಲ್ಲಿಯೂ ದೇಶಪ್ರೇಮದ ಚಿಲುಮೆ ಉಕ್ಕಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ […]

ಸಾವಿತ್ರಿಬಾಯಿ ಫುಲೆ ಅಕ್ಷರಮಾಲೆಯ ಕುರಿತಾದ ಅರಿವು

ಸಾವಿತ್ರಿಬಾಯಿ ಫುಲೆ ಅಕ್ಷರಮಾಲೆಯ ಕುರಿತಾದ ಅರಿವು

Monday, January 10th, 2022

ಪುತ್ತೂರು : ದಿನಾಂಕ 7/01/2022 ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾವಿತ್ರಿಬಾಯಿ ಫುಲೆ ಅಕ್ಷರಮಾಲೆಯ ಕುರಿತಾದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮಧುರ ಮನಸ್ಸು ಮಕ್ಕಳ ಸೇವಾ ಪ್ರತಿಷ್ಠಾನ ಬೋಳುವಾರ್ ಇದರ ಕಾರ್ಯದರ್ಶಿ, ವೈಶಾಲಿ ಮಧುವನ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ಸಾವಿತ್ರಿಬಾಯಿ ಫುಲೆ ಅವರ ಜೀವನದ ಇಣುಕು ನೋಟವನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಡಾ. ಶೋಭಿತಾ ಸತೀಶ್ ವಹಿಸಿದ್ದರು.

ವಿದ್ಯಾರ್ಥಿವೇತನ ಮಾಹಿತಿ ಕಾರ್ಯಕ್ರಮ

ವಿದ್ಯಾರ್ಥಿವೇತನ ಮಾಹಿತಿ ಕಾರ್ಯಕ್ರಮ

Tuesday, January 4th, 2022

ಪುತ್ತೂರು : ದಿನಾಂಕ 4/1/2022 ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ, ನಾರಾಯಣ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ನೀಡಿದರು. ಈ ರೀತಿಯ ವೇತನ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯಲು ಹಲವಾರು ರೀತಿಯಲ್ಲಿ ಸಹಾಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ಸಹ ಪ್ರಾಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ನಿರ್ವಹಿಸಿದರು.