ಆಟಿಡೊಂಜಿ ದಿನ ಕಾರ್ಯಕ್ರಮ
Wednesday, September 10th, 2025ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜುಲೈ 23ರಂದು ಆಟಿಡೊಂಜಿ ದಿನವನ್ನು ತುಳುನಾಡಿನ ಸಂಸ್ಕೃತಿ ಬಿಂಬಿಸುವ ಜನಪದ ಹಾಡುಗಳು, ನೃತ್ಯಗಳು ಮತ್ತು ನಾಟಕಗಳ ಮೂಲಕ ಪ್ರಶಿಕ್ಷಣಾರ್ಥಿಗಳು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಶೋಭಿತ ಸತೀಶ್, ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು. ಪ್ರಶಿಕ್ಷಣಾರ್ಥಿಗಳಾದ ಜಯಶ್ರೀ ಮತ್ತು ಹರ್ಷಿತ ಪ್ರಾರ್ಥಿಸಿ, ಧನ್ಯಶ್ರೀ ಮತ್ತು ಶಾರದ ಆಟಿ ತಿಂಗಳ ಮಹತ್ವದ ಕುರಿತು ಮಾತನಾಡಿದರು. ಚೈತನ್ಯ ನಿರೂಪಿಸಿದರು.








