"ಪತ್ತನಾಜೆ ಕೂಟೊ

“ಪತ್ತನಾಜೆ ಕೂಟೊ

Wednesday, July 10th, 2024

“ಪತ್ತನಾಜೆ ಕೂಟೊ ಪತ್ತನಾಜೆ ಬತ್ತ್ಂಡ್, ನನ ಕಂಡ ಬೆನ್ನಿದ ಪುಡೆಕ್ಕ್” ಎಂಬ ತುಳು ಕಾರ್ಯಕ್ರಮ ಶುಕ್ರವಾರ 24.05.2024 ರಂದು  ನಡೆಯಿತು.ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದ ತುಳುಕೂಟೊ ಪುತ್ತೂರು ಇದರ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ, ಯಾವುದೇ ಭಾಷೆಯಾಗಲಿ ನಿತ್ಯ ಬಳಸಿದರೆ ಮಾತ್ರ ಉಳಿಯಲು ಸಾಧ್ಯ. ತುಳು ಭಾಷೆಗಿರುವ ತಿರುಳು ಬೇರೆ ಭಾಷೆಗಿಲ್ಲ. ಪತ್ತನಾಜೆ ಎಂದರೆ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಲ್ಲಿಸಿ ಎಲ್ಲರೂ ಒಟ್ಟಾಗಿ ಬೇಸಾಯ ಮಾಡುವ ಸಮಯ. ತುಳು ಭಾಷೆಯಲ್ಲಿ ಪಾಡ್ದನ ಪ್ರಮುಖವಾದ ಮೌಖಿಕ ಸಾಹಿತ್ಯ […]

Thursday, May 16th, 2024

ದಿನಾಂಕ 04.05.2024ರಂದು  ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಶ್ರೀ ನವೀನ್ ಪ್ರಸಾದ್ ರೈ ವಿಜೇತರಿಗೆ ಬಹುಮಾನ ನೀಡಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರಾಜೀವಿ ಬಿ. ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ಧನ್ಯವಾದಗೈದರು.

ಪ್ರತಿಭಾ ದಿನ ಕಾರ್ಯಕ್ರಮ

ಪ್ರತಿಭಾ ದಿನ ಕಾರ್ಯಕ್ರಮ

Thursday, May 16th, 2024

ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಪ್ರತಿಭಾ ದಿನ ಕಾರ್ಯಕ್ರಮ ದಿನಾಂಕ: 20.04.2024 ರಂದು ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವಿದ್ವಾನ್ ಪ್ರೊ. ಸುದರ್ಶನ್ ಎಂ. ಎಲ್. ಭಟ್ ಮಾತನಾಡಿ, ವಿದ್ಯೆ ಇದ್ದರೆ ನಾವು ಎಲ್ಲರೆದುರು ಧೈರ್ಯವಾಗಿ ಮಾತನಾಡಬಹುದು. ಶಿಕ್ಷಕ ವೃತ್ತಿ ಅನ್ನೋದು ಬಹಳ ಮಹತ್ತರವಾದದ್ದು , ಶಿಕ್ಷಕನಾದವನು ಎಲ್ಲಾ ಮೂಲಗಳಿಂದಲೂ ಜ್ಞಾನವನ್ನು ಹೆಚ್ಚಿಸಲು ಸಾಧ್ಯ. ಪ್ರಶಿಕ್ಷಣಾರ್ಥಿಗಳು ಮುಂದಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಜೊತೆಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ವೇದಿಕೆ ಉತ್ತಮ ಅವಕಾಶ […]

ಸ್ವಾಗತ ಹಾಗೂ ಇಪ್ಪತ್ತರ ಸಂಭ್ರಮ  ಸರಣಿ ಉಪನ್ಯಾಸ ಮಾಲಿಕೆ

ಸ್ವಾಗತ ಹಾಗೂ ಇಪ್ಪತ್ತರ ಸಂಭ್ರಮ ಸರಣಿ ಉಪನ್ಯಾಸ ಮಾಲಿಕೆ

Thursday, May 16th, 2024

ದಿನಾಂಕ 19.04.2024 ರಂದು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಹಾಗೂ ಇಪ್ಪತ್ತರ ಸಂಭ್ರಮ : ಸರಣಿ ಉಪನ್ಯಾಸ ಮಾಲಿಕೆ ಉದ್ಘಾಟನೆ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ.) ಇದರ ನಿರ್ದೇಶಕರಾದ ಶ್ರೀ ಬಲರಾಮ ಆಚಾರ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ, ತಂತ್ರಜ್ಞಾನ ಅಭಿವೃದ್ಧಿ ಹೊಂದಿದ ಹಾಗೇ ಶಿಕ್ಷಕರು ಹೊಸ ಹೊಸ ವಿಷಯವನ್ನು ಕಲಿಯುವ ಗುಣವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿ ಉಪನ್ಯಾಸ ಮಾಲಿಕೆಯ ಮೊದಲನೆಯ ಉಪನ್ಯಾಸವನ್ನು ನಡೆಸಿಕೊಟ್ಟ ಶ್ರೀ ಸುನಿಲ್ ಪಲ್ಲಮಜಲು, ಉಪನ್ಯಾಸಕರು, ಶಕ್ತಿ ಪದವಿಪೂರ್ವ ಕಾಲೇಜು […]

'ವಾಕ್ ಶ್ರವಣದೋಷ ಮತ್ತು ಕಲಿಕಾ ನ್ಯೂನ್ಯತೆ' ಉಪನ್ಯಾಸ ಕಾರ್ಯಕ್ರಮ

‘ವಾಕ್ ಶ್ರವಣದೋಷ ಮತ್ತು ಕಲಿಕಾ ನ್ಯೂನ್ಯತೆ’ ಉಪನ್ಯಾಸ ಕಾರ್ಯಕ್ರಮ

Thursday, May 16th, 2024

ದಿನಾಂಕ: 10.04.2024 ದಂದು’ವಾಕ್ ಶ್ರವಣದೋಷ ಮತ್ತು ಕಲಿಕಾ ನ್ಯೂನ್ಯತೆ’ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಮಾಲಾ ಮಹೇಶ್ ವೈ., ಸಹಪ್ರಾಧ್ಯಾಪಕರು, ಮಂಗಳೂರು ಅಕಾಡೆಮಿ ಆಫ್ ಪ್ರೊಫೆಷನಲ್ ಸ್ಟಡೀಸ್ ಆಗಮಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅನುರಾಧ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಾಂದೀಪ್ ವಿಶೇಷ ಶಾಲೆಗೆ ಭೇಟಿ

ಸಾಂದೀಪ್ ವಿಶೇಷ ಶಾಲೆಗೆ ಭೇಟಿ

Thursday, May 16th, 2024

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ತೆಂಕಿಲ ಪುತ್ತೂರು ಇಲ್ಲಿನ ತೃತೀಯ ಸೆಮಿಸ್ಟರ್ ನ ಪ್ರಶಿಕ್ಷಣಾರ್ಥಿಗಳು ದಿನಾಂಕ 03/04/2024ರಂದು  ಸಾಂದೀಪ್ ವಿಶೇಷ ಶಾಲೆ, ಸುಳ್ಯ ಇಲ್ಲಿಗೆ ಭೇಟಿ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಹರಿಣಿ ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ಮಕ್ಕಳ ಕುರಿತು ಮಾಹಿತಿ ನೀಡಿದರು. ಶಾಲೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀ ಎಂ. ಬಿ. ಸದಾಶಿವ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಹಾಯಕ  ಪ್ರಾಧ್ಯಾಪಕರಾದ ಶ್ರೀಮತಿ ಅನುರಾಧ ಉಪಸ್ಥಿತರಿದ್ದರು.

ಚುನಾವಣೆಯ ಬಗ್ಗೆ ಅರಿವು ಕಾರ್ಯಕ್ರಮ

ಚುನಾವಣೆಯ ಬಗ್ಗೆ ಅರಿವು ಕಾರ್ಯಕ್ರಮ

Thursday, May 16th, 2024

ದಿನಾಂಕ 28/03/2024ರಂದು ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ‘ಯುವ ಮತದಾರರಿಗೆ ಅರಿವು ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಭರತ್ ಕುಮಾರ್. ಎ. ರಾಜ್ಯಶಾಸ್ತ್ರ ಉಪನ್ಯಾಸಕರು, ಸಂತ ಫಿಲೋಮಿನಾ ಪಿಯು ಕಾಲೇಜು ಪುತ್ತೂರು, ಮಾತನಾಡಿ ಚುನಾವಣಾ ವ್ಯವಸ್ಥೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಹೇಳಿದರು. ಅಂತೆಯೇ ಶ್ರೀ ನಂದಕಿಶೋರ್, ಅಸೋಸಿಯೇಟ್ ಪ್ರೊಫೆಸರ್, (ಇಂಗ್ಲಿಷ್ ) ಸರಕಾರಿ ಮಹಿಳಾ ಕಾಲೇಜು, ಪುತ್ತೂರು ಇವರು ಪ್ರಶಿಕ್ಷಣಾರ್ಥಿಗಳಿಗೆ ಚುನಾವಣೆಯ ಬಗ್ಗೆ ಅರಿವು ಮೂಡಿಸಿದರು.

'ಕ್ರಾಫ್ಟ್ ಸರ್ಟಿಫಿಕೇಟ್ ಕೋರ್ಸ್'

‘ಕ್ರಾಫ್ಟ್ ಸರ್ಟಿಫಿಕೇಟ್ ಕೋರ್ಸ್’

Thursday, May 16th, 2024

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ತೆಂಕಿಲ ಪುತ್ತೂರು ಇಲ್ಲಿ ದಿನಾಂಕ 26-03-2024 ರಂದು  ಪಿಡಿಲೈಟ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ‘ಕ್ರಾಫ್ಟ್ ಸರ್ಟಿಫಿಕೇಟ್ ಕೋರ್ಸ್’  ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಿಡಿಲೈಟ್ ನ ಸೇಲ್ಸ್ ವಿಭಾಗ ಮುಖ್ಯಸ್ಥರಾದ ಶ್ರೀ ದೀಕ್ಷಿತ್ ರವರು ಆಗಮಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ರಶ್ಮಿ ಹಾಗೂ ಶ್ರೀ ತೀಲಾಕ್ಷ ಅವರು ಆಗಮಿಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಕುರಿತು ಕಾರ್ಯಾಗಾರವನ್ನು ನಡೆಸಿಕೊಟ್ಟರು  

Thursday, May 16th, 2024

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ  ದಿನಾಂಕ 20-03-2023 ರಂದು ಓರಿಯೆಂಟೇಷನ್ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸುಧಾಕರ ‌ ರೈ ಹಾಗೂ ಸಂಚಾಲಕರಾದ ಶ್ರೀಮತಿ ಗಂಗಮ್ಮ ಹೆಚ್.ಶಾಸ್ತ್ರಿ ಪ್ರಶಿಕ್ಷಣಾರ್ಥಿಗಳಿಗೆ ಶುಭಹಾರೈಸಿದರು.  

01.02.2024 'Campus  Interview'

01.02.2024 ‘Campus Interview’

Tuesday, February 27th, 2024