ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಜನರಲ್ ಓರಿಯೆಂಟೇಶನ್ ಕಾರ್ಯಕ್ರಮ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನೂತನವಾಗಿ ಸೇರ್ಪಡೆಗೊಂಡ 2024-25ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಜನರಲ್ ಓರಿಯೆಂಟೇಶನ್ ಕಾರ್ಯಕ್ರಮ ಮಾರ್ಚ್ 10, 2025 ರಂದು ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಸುಲೇಖಾ ವರದರಾಜ್, ಆಡಳಿತ ಮಂಡಳಿ ಸದಸ್ಯರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಅವರು ಮಾತನಾಡಿ, ಶಿಕ್ಷಕರು ಜ್ಞಾನವನ್ನು ಮಾತ್ರವಲ್ಲ, ಮೌಲ್ಯ ಹಾಗೂ ಕೌಶಲಗಳನ್ನು ಸಹ ಬೆಳೆಸಿಕೊಳ್ಳಬೇಕು. ಅವರು ಸಮಾಜಮುಖಿ ಚಿಂತಕರಾಗಬೇಕು. ಅಧಿಕಾರ ಮತ್ತು ಹುದ್ದೆಗಳು ಬಂದು ಹೋಗುತ್ತವೆ, ಆದರೆ ಶಿಕ್ಷಕರ ಜ್ಞಾನ ಹಾಗೂ ವಿದ್ಯಾರ್ಥಿಗಳ ಮೇಲಿನ […]

ವಿವೇಕಾನಂದ ನರ್ಸರಿ ಶಿಕ್ಷಕರ ಶಿಕ್ಷಣ ಅಕಾಡೆಮಿ ಉದ್ಘಾಟನೆ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕಾನಂದ ನರ್ಸರಿ ಶಿಕ್ಷಕರ ಶಿಕ್ಷಣ ಅಕಾಡೆಮಿಯ ಉದ್ಘಾಟನಾ ಸಮಾರಂಭವು ಫೆಬ್ರವರಿ 28 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ತಾರಾ ಕಾಳಿಚರಣ್, ವಿದ್ಯಾಭಾರತಿ ಕ್ಷೇತ್ರೀಯ ಸಹ ಶಿಶು ಶಿಕ್ಷಣ ಪ್ರಮುಖ್, ಬೆಂಗಳೂರು ಅವರು, ಮಗು ಸಮಗ್ರ ಬೆಳವಣಿಗೆಯನ್ನು ಪಡೆಯಲು ಶಿಕ್ಷಣವು ತಾಯಿಯ ಗರ್ಭದಲ್ಲಿಯೇ ಆರಂಭವಾಗಬೇಕು. ಮಗು ಮೂರು ವರ್ಷದವರೆಗೆ ತಾಯಿಯಿಂದಲೇ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಪ್ರಾಥಮಿಕ ಜ್ಞಾನವನ್ನು ಪಡೆಯುತ್ತದೆ. ನಂತರ ಶಾಲಾ ವಾತಾವರಣದಲ್ಲಿ ಮೊಂಟೆಸರಿ ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. […]

ಭಾರತ್ ಬೋಧ್ ಮಾಲಾ ಉಪನ್ಯಾಸ ಸರಣಿಯ 5ನೇ ಆನ್ಲೈನ್ ಕಾರ್ಯಕ್ರಮ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರು ಮತ್ತು ವಿದ್ಯಾಭಾರತಿ ಉಚ್ಚ ಶಿಕ್ಷಾ ಸಂಸ್ಥಾನ, ಕರ್ನಾಟಕ, ಜಂಟಿ ಆಶ್ರಯದಲ್ಲಿ ಭಾರತ್ ಬೋಧ್ ಮಾಲಾ ಉಪನ್ಯಾಸ ಸರಣಿಯ 5ನೇ ಆನ್ಲೈನ್ ಕಾರ್ಯಕ್ರಮ ಫೆಬ್ರವರಿ 22ರಂದು ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆರ್ & ಡಿ ಫಾಕ್ಸ್‌ಕಾನ್ ತಂತ್ರಜ್ಞಾನ ಸಮೂಹದ ಮುಖ್ಯಸ್ಥರಾದ ಶ್ರೀ ಎಲ್ ಎಸ್ ವಿಷ್ಣು ಕಿರಣ್ ಅವರು “ಭಾರತೀಯ ಕೌನ್ಸೆಲಿಂಗ್” ವಿಷಯದ ಕುರಿತು ವಿಚಾರಗಳನ್ನು ಪ್ರಸ್ತುತಪಡಿಸಿದರು. ಭಾರತೀಯ ಕೌನ್ಸೆಲಿಂಗ್ ಧನಾತ್ಮಕ ಮನೋವಿಜ್ಞಾನವಷ್ಟೇ ಅಲ್ಲ, ಅದು ವ್ಯಕ್ತಿಯ ಆಂತರಿಕ ಸಮಸ್ಯೆಗಳ ಪರಿಹಾರಕ್ಕಾಗಿ […]

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದೀಪ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ದೀಪ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜನವರಿ 28, ಮಂಗಳವಾರದಂದು ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಎಸ್ ಆರ್ ಗೌರವಾರ್ಪಣೆಯನ್ನು ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕೆಂಬ ಬಯಕೆ ನಮ್ಮಲ್ಲಿರಬೇಕು. ಅದಕ್ಕಾಗಿ ಪಣತೊಟ್ಟು ಕಲಿಯುವುದು ಮತ್ತು ನಿರಂತರ ಶ್ರಮ ವಹಿಸುವುದು ಅತೀ ಮುಖ್ಯ. ನಾನು ಕೂಡಾ ಇಂತಹ ಗುರಿಯೊಂದನ್ನು ಹೊಂದಿದ್ದೆ – “ಒಂದು ದಿನ ಹಸಿರು ಶಾಯಿ […]

ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜನವರಿ 27ರಂದು ಮತದಾರರ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಭುವನೇಶ್ವರಿ ಎ. ಎನ್. ಅವರು ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞೆಯನ್ನು ಮಾಡಿಸಿದರು.  ಭಾರತದ ಜಾಗರೂಕ ನಾಗರಿಕರಾಗಿರುವ ನಾವು, ನಮ್ಮ ಪ್ರಜಾಸತ್ತಾತ್ಮಕ ಸಂಪ್ರದಾಯಗಳು, ಮುಕ್ತ, ನ್ಯಾಯಸಮ್ಮತ ಹಾಗೂ ಚುನಾವಣೆಗಳ ಗೌರವವನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಲಾಯಿತು. ಧರ್ಮ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರಣೆಗಳಿಂದ ಪ್ರಭಾವಿತರಾಗದೆ, ನಿರ್ಭೀತರಾಗಿ ಪ್ರತಿ ಚುನಾವಣೆಯಲ್ಲಿ ಮತ ಚಲಾಯಿಸುವುದಾಗಿ ಎಲ್ಲರೂ ಸಂಕಲ್ಪ ಮಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಎಡ್. ಸಮನ್ವಯ ಸಮಿತಿ ಭೇಟಿ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಎಡ್. ಸಮನ್ವಯ ಸಮಿತಿಯು ಜನವರಿ 27 ರಂದು ಭೇಟಿ ನೀಡಿತು. ಬಿ.ಎಡ್ ನಲ್ಲಿ ಏನು ಕಲಿತಿರುವಿರೋ, ಯಾವ ರೀತಿ ಚಟುವಟಿಕೆ ಮತ್ತು ಮಾದರಿಗಳ ಮೂಲಕ ಮಕ್ಕಳಿಗೆ ಬ್ಲಾಕ್ ಟೀಚಿಂಗ್ ಮತ್ತು ಇಂಟರ್ನ್ ಶಿಪ್ ನಲ್ಲಿ ಬೋಧಿಸಿರುವಿರೋ ಅದನ್ನು ಶಿಕ್ಷಕರಾದ ಮೇಲೂ ಮುಂದುವರಿಸಬೇಕು ಎಂದು ಮಂಗಳೂರಿನ ಹಂಪನಕಟ್ಟೆಯ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್ ಶ್ರೀಮತಿ ಶೋಭಾ ಕುಮಾರಿ ಪ್ರಶಿಕ್ಷಣಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಸಂಯುಕ್ತ ಶಿಕ್ಷಣ ಅಧ್ಯಯನ ಮಂಡಳಿ, ಶಾರೀರಿಕ […]

76ನೇ ಗಣರಾಜ್ಯೋತ್ಸವ ಆಚರಣೆ

Tuesday, April 8th, 2025

ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣ, ತೆಂಕಿಲ ಇಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಸುಧೀರ್ ತೋಳ್ಪಾಡಿ, ವಕೀಲರು ಸಂವಿಧಾನದ ಮಹತ್ವವನ್ನು ಉಲ್ಲೇಖಿಸಿ, ಹಕ್ಕುಗಳು ಹಾಗೂ ಕರ್ತವ್ಯಗಳು ಸಮಾನವಾಗಿ ಮುಖ್ಯವಾದವು ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಸಂಚಾಲಕರು, ಸದಸ್ಯರು, ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಮುಖ್ಯ ಶಿಕ್ಷಕರು,  ಬಿ.ಎಡ್. ಕಾಲೇಜು, ನರೇಂದ್ರ ಪದವಿ ಪೂರ್ವ  […]

ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ವಾರ್ಷಿಕ ಕ್ರೀಡಾಕೂಟ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ವಾರ್ಷಿಕ ಕ್ರೀಡಾಕೂಟವನ್ನು ದಿನಾಂಕ 9.01.2025 ಹಾಗೂ 11.01.2025 ರಂದು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಹೊರಾಂಗಣ ಕ್ರೀಡೆಗಳಾದ 100 ಮೀಟರ್ ಮತ್ತು 200 ಮೀಟರ್ ಓಟ, 4*100ಮೀಟರ್ ರಿಲೇ, ವೇಗದ ನಡಿಗೆ ಹಾಗೂ ಒಳಾoಗಣ ಕ್ರೀಡೆಗಳಾದ ಶೆಟಲ್ ಬ್ಯಾಡ್ಮಿಂಟನ್, ಚೆಸ್, ಕ್ಯಾರಂ ಸ್ಪರ್ಧೆಗಳನ್ನು ನಡೆಸಲಾಯಿತು.ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಅಂಗವಾಗಿ ಜನವರಿ 22 ಮತ್ತು 23 ರಂದು ಭಾಷಣ, ಭಾವಗೀತೆ, ಸಸ್ಯಗಳ ಗುರುತಿಸುವಿಕೆ ಮತ್ತು ರಂಗೋಲಿ ಸ್ಪರ್ಧೆಗಳನ್ನು  ನಡೆಸಲಾಯಿತು.

ವಿವೇಕಾನಂದ ಜಯಂತಿ ಕಾರ್ಯಕ್ರಮ

ವಿವೇಕಾನಂದ ಜಯಂತಿ ಕಾರ್ಯಕ್ರಮ

Tuesday, April 8th, 2025

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನೆಹರುನಗರ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಲ್ಲಿ ಜನವರಿ 13ರಂದು ವಿವೇಕಾನಂದ ಜಯಂತಿ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ವೆಬ್ಸೈಟ್ ಅನಾವರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಂದೇ ಮಾತರಂ ಪಾಠಶಾಲೆ ಬೆಂಗಳೂರು ಇದರ ಸ್ಥಾಪಕರಾದ ಡಾ ಜಿ ಬಿ ಹರೀಶ್, ಆಧ್ಯಾತ್ಮಿಕ ವಿಜ್ಞಾನದಲ್ಲಿ ನಂಬಿಕೆಗಿಂತ ಅನುಭವಕ್ಕೆ ಹೆಚ್ಚಿನ ಸ್ಥಾನವಿದೆ.ಅನುಭವದ ಮಾತುಗಳನ್ನು ವಿವೇಕಾನಂದರು ಜಗತ್ತಿಗೆ ಪಸರಿಸುವ ಕಾರ್ಯವನ್ನು ಮಾಡಿದರು. ಪ್ರಕೃತಿಯ ಮಡಿಲಲ್ಲಿ ಮನುಷ್ಯ ಶಾಶ್ವತವಾದ ಶಾಂತಿಯನ್ನು ಪಡೆಯಬಹುದು. ವಿವೇಕಾನಂದರ […]

“ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ”- ಉಪನ್ಯಾಸ ಕಾರ್ಯಕ್ರಮ

“ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ”- ಉಪನ್ಯಾಸ ಕಾರ್ಯಕ್ರಮ

Monday, April 7th, 2025

ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಗದಗ ರಾಮಕೃಷ್ಣ ಮಿಷನ್ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ನಲ್ಲಿ ಜನವರಿ 15ರಂದು “ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ” ಎಂಬ ವಿಷಯದ ಕುರಿತು ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಯಾವುದೇ ದೇಶವು ಉನ್ನತ ಮಟ್ಟಕ್ಕೆ ತಲುಪಲು ತರಗತಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಶಿಕ್ಷಕರು ಮಕ್ಕಳಿಗೆ ಸ್ಪೂರ್ತಿ ಮತ್ತು ಜ್ಞಾನವನ್ನು ನೀಡಿ, ಅವರೊಳಗಿನ ಶಕ್ತಿಯನ್ನು ಹೊರತರುವ ಕೆಲಸ ಮಾಡಬೇಕು. […]