ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 24.01.2023 ರಂದು ಅಪರಾಹ್ನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಪ್ರಸನ್ನ ಭಟ್ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಶುಭ ಕೋರಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಹ ಪ್ರಾಧ್ಯಾಪಕರು ಉಪಸ್ಥಿತರಿದ್ದರು ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮಕ್ಕೆ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಯಾದ ಬಾಲಕೃಷ್ಣ ಕೆ ಸ್ವಾಗತಿಸಿ ,ಪ್ರತಿಭಾ ವಂದಿಸಿದರು. ಸುಶ್ಮಿತಾ ಪಿ […]
ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 24.01.2023 ರಂದು ದೀಪ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ಶಕ್ತಿ ವಸತಿಯುತ ಶಾಲೆ ಮಂಗಳೂರು ಇದರ ಪ್ರಧಾನ ಸಲಹೆಗಾರರಾದ ಶ್ರೀ ರಮೇಶ್ ಕೆ ಆಗಮಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯೇ ಸಮಾಜದ ಬದಲಾವಣೆಗೆ ನಾಂದಿಯಾಗಿದೆ ಎಂದು ತಿಳಿಸಿದರು. ಹಾಗೆಯೇ ಸರಕಾರಿ ಪ್ರೌಢಶಾಲೆ ದೋಲ್ಪಾಡಿ ಇಲ್ಲಿಯ ಸಹ ಶಿಕ್ಷಕಿಯಾದ ಶ್ರೀಮತಿ ಉಷಾದೇವಿ ಕೆ ಪಿ ಆಗಮಿಸಿ ಶಿಕ್ಷಕರು ಎಲ್ಲರಿಗೂ ಮಾದರಿಯಾಗಿ ಬದುಕಬೇಕು ಎಂದು ತಿಳಿಸಿದರು. ಕಾರ್ಯಕ್ರಮದ […]
ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ 2022-23 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಲಾಗಿತ್ತು. ದಿನಾಂಕ 20-01-2023 ರಂದು ತ್ರೋಬಾಲ್, ಗುಂಡೆಸೆತ, ಚಕ್ರ ಎಸೆತ, ಹಗ್ಗ ಜಗ್ಗಾಟ ಮತ್ತು ಉದ್ದ ಜಿಗಿತ, ದಿನಾಂಕ 21-01-2023 ರಂದು ಕ್ರಿಕೆಟ್, ರಿಲೇ, 100 ಮೀಟರ್ ಓಟ, ನಡಿಗೆ ಸ್ಪರ್ಧೆ ಮತ್ತು ಲಗೋರಿ ಹಾಗೂ ದಿನಾಂಕ 23-01-2023 ರಂದು ಚದುರಂಗ, ಕ್ಯಾರಂ ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ನಡೆಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ವತಿಯಿಂದ ಹಿಂದುತ್ವ- ರಾಷ್ಟ್ರೀಯತೆಯ ಸಂಕಲ್ಪದೊಂದಿಗೆ ವಿವೇಕಾನಂದ ಜಯಂತಿಯು ದಿನಾಂಕ 12-01-2023ನೇ ಗುರುವಾರದಂದು ವಿವೇಕಾನಂದ ಕ್ಯಾಂಪಸ್ ನೆಹರುನಗರ, ಪುತ್ತೂರು ಇಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಅನಂತಕುಮಾರ್ ಹೆಗಡೆ, ಮಾನ್ಯಸಂಸದರು ಉತ್ತರಕನ್ನಡ ಜಿಲ್ಲೆ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಾಜಿ ಸಚಿವರು, ಭಾರತ ಸರ್ಕಾರ ಇವರು ಆಗಮಿಸಿ, ಹಿಂದುತ್ವ ಮತ್ತು ರಾಷ್ಟ್ರೀಯತೆಯ ಬಗ್ಗೆ ಮಾತಾಡಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೆ ಎಂ ಕೃಷ್ಣ ಭಟ್ ಉಪಸ್ಥಿತರಿದ್ದರು. […]
ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಸಹಯೋಗದೊಂದಿಗಿರುವ ರೇಡಿಯೋ ಪಾಂಚಜನ್ಯ 90.8FM ಇಲ್ಲಿ 09-01-2023 ರಂದು ವಿವೇಕಾನಂದ ಜಯಂತಿಯ ಪ್ರಯುಕ್ತ ವಿವೇಕಾನಂದರ ಚಿಂತನೆಯ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ಮಂಜುಶ್ರೀ ಕವನವಾಚನ, ಆಶಿತಾ ದೇಶಭಕ್ತಿ ಗೀತೆ ಹಾಗೂ ಬಾಲಕೃಷ್ಣ ವಿವೇಕಾನಂದರ ಬಗ್ಗೆ ಭಾಷಣ ಮಾಡಿದರು. ಇವರೊಂದಿಗೆ ನಮ್ಮ ಕಾಲೇಜಿನ ಸಹಪ್ರಾಧ್ಯಾಪಕಿಯಾದ ಶ್ರೀಮತಿ ವಿದ್ಯಾಲಕ್ಷ್ಮಿ ಇವರು ಉಪಸ್ಥಿತರಿದ್ದರು.
ದಿನಾಂಕ 23-12-2022 ರಂದು ‘ಮೇಧಾ’ ಗಣಕಯಂತ್ರ ಕೊಠಡಿ ಮತ್ತು ತರಗತಿ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಸಿದ್ದೇಶ್ ನಾಗೇಂದ್ರ ಅಧ್ಯಕ್ಷರು, ಎಂ ಎಸ್ ನಾಗೇಂದ್ರ ಸೇವಾ ಪ್ರತಿಷ್ಠಾನ ಬೇಲೂರು, ಹಾಸನ ಜಿಲ್ಲೆ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ವಿದ್ಯೆಯು ಪ್ರತಿಯೊಬ್ಬ ಪ್ರಜೆಯ ಹಕ್ಕು ಆಗಿದೆ ಮತ್ತು ವಿದ್ಯೆ ಯೊಂದಿಗೆ ಸಂಸ್ಕಾರವೂ ಮುಖ್ಯ ಎಂದು ಉದ್ಘಾಟಕರ ಭಾಷಣದಲ್ಲಿ ತಿಳಿಸಿದರು. ಶ್ರೀ. ಎ. ವಿ. ನಾರಾಯಣ ನಿವೃತ್ತ ಪ್ರಾಂಶುಪಾಲರು, ವಿವೇಕಾನಂದ […]
ದಿನಾಂಕ 20-12-2022 ರಂದು ಮಹಿಳೆ ಮತ್ತು ಕಾನೂನು ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ.ಜಿ.ಶೆಟ್ಟಿ ಇವರು ಮಹಿಳೆ ಮತ್ತು ಕಾನೂನು ಬಗ್ಗೆ ಮಾಹಿತಿ ನೀಡಿ ಮಹಿಳೆ ಮತ್ತು ಕಾನೂನು ತಾಯಿ ಮತ್ತು ಮಗುವಿಗಿರುವ ಸಂಬಂಧ ಎಂದು ತಿಳಿಸಿದರು.ಹಾಗೆಯೇ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಯನಾ ರೈ ಮತ್ತು ನ್ಯಾಯವಾದಿ ಶ್ರೀಮತಿ ಹೀರಾ ಉದಯ್ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.ಕಾಲೇಜಿನ ಪ್ರಾಂಶುಪಾಲರಾದ […]