ಬಸವೇಶ್ವರ ಜಯಂತಿ ಪ್ರಯುಕ್ತ “ಬಸವಣ್ಣ : ಒಂದು ರಾಷ್ಟ್ರ ಪ್ರಜ್ಞೆ” -ಉಪನ್ಯಾಸ ಕಾರ್ಯಕ್ರಮ

Friday, May 16th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೇ 5 ರಂದು ಬಸವೇಶ್ವರ ಜಯಂತಿ ಪ್ರಯುಕ್ತ “ಬಸವಣ್ಣ : ಒಂದು ರಾಷ್ಟ್ರ ಪ್ರಜ್ಞೆ” ವಿಷಯದ ಕುರಿತು  ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದ. ಕ. ಇದರ ಸಹ ಕಾರ್ಯದರ್ಶಿ ಶ್ರೀ ಲತೇಶ್ ಬಾಕ್ರಬೈಲು ಮಾತನಾಡಿ ಬಸವಣ್ಣನವರ ಕಾಲದಲ್ಲಿ ಅವರು ನೀಡಿದ ಸಾಮಾಜಿಕ ಕೊಡುಗೆ, ವಚನ ಸಾಹಿತ್ಯ ಕೊಡುಗೆ, 12ನೇ ಶತಮಾನದಲ್ಲಿ ಇದ್ದ ಸಾಮಾಜಿಕ ಪರಿಸ್ಥಿತಿ ಮತ್ತು ಅಸ್ಪೃಶ್ಯತೆಯ ವಿರುದ್ಧ ನಡೆಸಿದ ಹೋರಾಟ ಹಾಗೆಯೇ ಅನುಭವ […]

ಮಾನವ ಹಕ್ಕುಗಳ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮ

Friday, May 16th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮೇ 3ರಂದು ಪ್ರಶಿಕ್ಷಣಾರ್ಥಿಗಳಿಗೆ ಮಾನವ ಹಕ್ಕುಗಳ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ವತ್ಸಲಾ ನಾಯಕ್ ಮಾತನಾಡಿ, ಇಂದಿನ ದಿನಗಳಲ್ಲಿ ಮಾನವ ಹಕ್ಕನ್ನು ರಕ್ಷಿಸುವುದು ಅತಿ ಮುಖ್ಯ. ಹಕ್ಕು ಎನ್ನುವುದು ಸಮಾಜದ ಪ್ರತಿಯೊಂದು ವ್ಯಕ್ತಿ, ತಾರತಮ್ಯ ಇಲ್ಲದೆ ಹುಟ್ಟುವ ಮತ್ತು ತನ್ನ ಸಮಗ್ರ ಬೆಳವಣಿಗೆಯಲ್ಲಿ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಕಾನೂನುಬದ್ಧ ಅವಕಾಶ ಎಂದು ತಿಳಿಸಿದರು ಹಾಗೂ ಮಾನವ ಹಕ್ಕುಗಳ ಒಡಂಬಡಿಕೆಯ ಕುರಿತಾಗಿ ತಿಳಿಸಿ ಶೈಕ್ಷಣಿಕ ಹಕ್ಕುಗಳ […]

ಸಂತ ಅಲೋಶಿಯಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಅಂತರ್‌ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ

Tuesday, May 6th, 2025

ಸಂತ ಅಲೋಶಿಯಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏಪ್ರಿಲ್ 28 ರಂದು ನಡೆದ “EDUNOVA – 2025” ಅಂತರ್‌ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ನ ಪ್ರಶಿಕ್ಷಣಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಇಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು,  ಜನಪದ ಗೀತೆ, ಐಸ್‌ಬ್ರೇಕರ್, ಎಜು ಕಾಮಿಡಿ, ಸ್ಟಾರ್ ಆಫ್ ಎಜುನೋವ್, ಸ್ಪಿನ್ ಆಂಡ್ ಸ್ಟ್ರೀಮ್, ಪಿಕ್ ಅಂಡ್ ಟೀಚ್, ಫೇಸ್ ಪೈಂಟಿಂಗ್‌, ರಂಗೋಲಿ, ಫೋಟೋಗ್ರಾಫಿ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ . ಪ್ರಶಿಕ್ಷಣಾರ್ಥಿಗಳಿಗೆ ಪ್ರಾಂಶುಪಾಲೆ ಡಾ. […]

ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ

Tuesday, May 6th, 2025

 ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏ. 24ರಂದು ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಡ್ವೊಕೇಟ್ ಶ್ರೀಮತಿ ಸ್ವಾತಿ ಜಗನ್ನಾಥ್ ರೈ ಅವರು, “ಭಾರತದಲ್ಲಿ ರ‍್ಯಾಗಿಂಗ್ ನಿಷೇಧವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿ ಇದು ಹೆಚ್ಚಾಗಿ ಕಾಣಬರುತ್ತಿದೆ. ಯಾರು ರ‍್ಯಾಗಿಂಗ್ ಗೊಳಗಾಗುತ್ತಾರೋ ಅವರು ಯುಜಿಸಿ 2009ರ ಕಾಯ್ದೆಯಡಿಯಲ್ಲಿ ದೂರು ನೀಡಬಹುದಾಗಿದೆ. ಇದರಿಂದ ಅಪರಾಧಿಗೆ ಕಾನೂನುಬದ್ಧವಾದ ಶಿಕ್ಷೆ ವಿಧಿಸಲಾಗುತ್ತದೆ,” ಎಂದು ರ‍್ಯಾಗಿಂಗ್ ಅನ್ನು ತಡೆಗಟ್ಟುವ ವಿವಿಧ ಮಾರ್ಗಗಳ ಕುರಿತು ಸವಿವರವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. […]

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಪಿಲಿಕುಳ ನಿಸರ್ಗಧಾಮಕ್ಕೆ ಸಾಂಸ್ಕೃತಿಕ ಅಧ್ಯಯನ ಭೇಟಿ

Monday, April 21st, 2025

ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್‌ನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಏಪ್ರಿಲ್ 15ರಂದು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಸಾಂಸ್ಕೃತಿಕ ಅಧ್ಯಯನದ ಉದ್ದೇಶದಿಂದ ಭೇಟಿ ನೀಡಿದರು. ಪಿಲಿಕುಳದಲ್ಲಿನ ಗುತ್ತಿನ ಮನೆ, ವಿಜ್ಞಾನ ಕೇಂದ್ರ, ಸಂಶೋಧನಾ ಕೇಂದ್ರ, ಸ್ವಾಮಿ ವಿವೇಕಾನಂದ ತಾರಾಲಯ, ಹರ್ಬೇರಿಯಂ ಮತ್ತು ಬೋಟಾನಿಕಲ್ ಗಾರ್ಡನ್, ಮ್ಯೂಸಿಯಂ, ಪ್ರಾಣಿ ಸಂಗ್ರಹಾಲಯ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವೈಶಿಷ್ಟ್ಯತೆ ಮತ್ತು ಮಾಹಿತಿಯನ್ನು ಕಲೆ ಹಾಕಿದರು. ಇಂದಿನ ವಿದ್ಯಾರ್ಥಿಗಳಿಗೆ ಪುರಾತನ ಕಾಲದ ಸಂಸ್ಕೃತಿ ಮತ್ತು ಕೃಷಿ ಪರಂಪರೆಗಳ ಅರಿವು ಕಡಿಮೆ ಇರುವುದರಿಂದ, […]

ಅಕ್ಷಯ ಕಾಲೇಜಿನಲ್ಲಿ ನಡೆದ ಅಂತರ್-ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಶಸ್ತಿ

Monday, April 21st, 2025

ಅಕ್ಷಯ ಕಾಲೇಜು, ಪುತ್ತೂರು ಇಲ್ಲಿ ಏಪ್ರಿಲ್ 8ರಂದು ನಡೆದ ‘ಕೃತ್ವ 2025’ ಅಂತರ್-ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ನ ಪ್ರಶಿಕ್ಷಣಾರ್ಥಿಗಳು ಸೆಕೆಂಡ್ ರನ್ನರ್-ಅಪ್ ಸ್ಥಾನ ಪಡೆದು ಕಾಲೇಜಿಗೆ ಗೌರವ ತಂದಿದ್ದಾರೆ. ಈ ಸ್ಪರ್ಧೆಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬೀದಿ ನಾಟಕದಲ್ಲಿ ಅಶ್ವಿನಿ ಕೆ ತಂಡ ಪ್ರಥಮ ಸ್ಥಾನ , ಟ್ಯಾಟೂ ಡಿಸೈನ್ ಸ್ಪರ್ಧೆಯಲ್ಲಿ ಪಲ್ಲವಿ ಮತ್ತು ರಶ್ಮಿ ಪ್ರಥಮ ಹಾಗೂ ಸೋಪ್ ಕರ್ವಿಂಗ್ ಸ್ಪರ್ಧೆಯಲ್ಲಿ ದ್ವಿತೀಯ , ಸಮೂಹ ನೃತ್ಯದಲ್ಲಿ ಭವಿತ […]

ಕೆ. ಎಸ್. ಓ. ಯು. ದೂರಶಿಕ್ಷಣ ಪ್ರಶಿಕ್ಷಣಾರ್ಥಿಗಳಿಂದ ‘ಗುರುವಂದನೆ’

Tuesday, April 8th, 2025

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇದರ ಅಧ್ಯಯನ ಕೇಂದ್ರ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏಪ್ರಿಲ್ 05 ರಂದು 2025-26 ನೇ ಸಾಲಿನ ಬಿ. ಎಡ್. ದೂರಶಿಕ್ಷಣದ ಪ್ರಶಿಕ್ಷಣಾರ್ಥಿಗಳಿಂದ ‘ಗುರುವಂದನೆ ಕಾರ್ಯಕ್ರಮ’ ನಡೆಯಿತು.     ಕಾರ್ಯಕ್ರಮದ ಮುಖ್ಯ ಆಶಯದಂತೆ, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎಲ್ಲಾ ಸಹಾಯಕ ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.  ಪ್ರಶಿಕ್ಷಣಾರ್ಥಿಗಳು ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗುರುವಂದನೆ ಸ್ವೀಕರಿಸಿದ ಪ್ರಾಧ್ಯಾಪಕರು, ಆಡಳಿತ ಮಂಡಳಿಯ ಸದಸ್ಯರಾದ […]

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರು ಇಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಮಂಗಳೂರು), ತಾಲೂಕು ಕಾನೂನು ಸೇವೆಗಳ ಸಮಿತಿ (ಪುತ್ತೂರು), ವಕೀಲರ ಸಂಘ, ಹಾಗೂ ಲಯನ್ಸ್ ಕ್ಲಬ್, ಪುತ್ತೂರು ಸಹಯೋಗದಲ್ಲಿ ಮಾರ್ಚ್ 27 ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಅರ್ಚನಾ ಕೆ. ಉಣ್ಣಿತಾನ್, ಗೌರವಾನ್ವಿತ ಪ್ರಧಾನ ವ್ಯವಹಾರಿಕ ನ್ಯಾಯಧೀಶರು ಮತ್ತು ಜೆ. ಎಂ. ಎಫ್. ಸಿ. ಪುತ್ತೂರು ಮಾತನಾಡಿ, “ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಬೇಕು […]

ಸಾಂದೀಪ್ ವಿಶೇಷ ಶಾಲೆಗೆ ಅಧ್ಯಯನ ಭೇಟಿ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ  ಪ್ರಶಿಕ್ಷಣಾರ್ಥಿಗಳು  ಸಮನ್ವಯ ಶಿಕ್ಷಣದ ಅಧ್ಯಯನಕ್ಕಾಗಿ ಎಂ ಬಿ ಫೌಂಡೇಶನ್‌ನ ಸಾಂದೀಪ್ ವಿಶೇಷ ಶಾಲೆಗೆ ಮಾರ್ಚ್ 20 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ಸದಾಶಿವ ಮಾತನಾಡಿ, “ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಬೋಧಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಅವರು ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸಲು ಪ್ರಭಾವ ಬೀರುತ್ತಾರೆ. ಶಿಕ್ಷಕರು ಶಾಲೆಯಲ್ಲಿ ವಿವಿಧ ರೀತಿಯ ಮಕ್ಕಳನ್ನು ಎದುರಿಸುತ್ತಾರೆ,ಅವರ ಪ್ರತಿಭೆಗಳನ್ನು ಗುರುತಿಸಿ, ಸರಿಯಾದ […]

2025-26ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಪ್ರತಿಭಾ ದಿನಾಚರಣೆ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಪ್ರತಿಭಾ ದಿನಾಚರಣೆ ಮಾರ್ಚ್ 19 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಾಲು ಎಸ್.ಡಿ .ಎಂ. ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀ ರಾಮಕೃಷ್ಣ ಭಟ್ ಅವರು, “ಯಶಸ್ಸಿನ ಹಿಂದೆ ಅನೇಕ ಸವಾಲುಗಳು ಇವೆ. ಆ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುಂದುವರೆಯಬೇಕು. ಶಿಕ್ಷಕರು ತಮ್ಮ ವೃತ್ತಿಯನ್ನು ಕೇವಲ ಉದ್ಯೋಗವಾಗಿ ನೋಡದೆ, ಅದನ್ನು ಪ್ರವೃತ್ತಿಯಾಗಿ ಸ್ವೀಕರಿಸಬೇಕು. ಒಮ್ಮೆ ಶಿಕ್ಷಕ ವೃತ್ತಿಗೆ ಪ್ರವೇಶಿಸಿದ ಬಳಿಕ ಹಿಂತಿರುಗಿ […]