ದಿನಾಂಕ : 26/07/2021ರಂದು ನಮ್ಮ ಕಾಲೇಜಿನಲ್ಲಿ ಐತಿಹಾಸಿಕ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ಮಾಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಡಾ. ಸುರೇಶ್ ಸಹಾಯಕ ಪ್ರಾಧ್ಯಪಕರು ಅರ್ಥಶಾಸ್ತ್ರ ವಿಭಾಗ ಪಾಲ್ಗೊಂಡಿದ್ದರು. ಮುಖ್ಯ ಅಭ್ಯಾಗತರಾಗಿ ಕಾರ್ಗಿಲ್ ಯುದ್ಧದ ಹಿನ್ನಲೆ ಹಾಗೂ ನಾವು ಕಾರ್ಗಿಲ್ ದಿನಾಚರಣೆಯನ್ನು ಯಾಕೆ ಆಚರಿಸಬೇಕು ಎಂದು ಮನೋಜ್ಞವಾಗಿ ತಿಳಿಸಿದರು. ಭಾರತೀಯ ಯೋಧರ ತ್ಯಾಗ, ಬಲಿದಾನಗಳನ್ನು ಮನ ಮುಟ್ಟುವಂತೆ ಹೇಳಿದರು.
ಭಾರತೀಯ ಯೋಧರು ಎಂದಿಗೂ ಕೆಚ್ಚೆದೆಯ ವೀರರು ಹೊರತು ಹೇಡಿಗಳಲ್ಲ ಎಂದು ತಿಳಿಸಿದರು.ನಾವೆಲ್ಲರೂ ಭಾರತೀಯರು ಯಾಕೆ ಈ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಬೇಕೆಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತ ಸತೀಶ್ ರವರು ವಹಿಸಿಕೊಂಡಿದ್ದರು. ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ನಮ್ಮ ಕಾಲೇಜಿನ ಸಹಾಯಕ ಪ್ರಾಧ್ಯಪಕರಾಗಿರುವ ಶ್ರೀಮತಿ ಅನುರಾಧ ರವರು ಸಂಯೋಜನೆ ಮಾಡಿದ್ದರು.